ಮಂಗಳೂರು, ನ.10: ಕ್ಯಾಥೋಲಿಕ್ ಸ್ಪೋರ್ಟ್ಸ್ ಅಸೋಸಿಯೇಶನ್, ಮಂಗಳೂರು, ದಕ್ಷಿಣ ಕನ್ನಡ ಇದರ ವತಿಯಿಂದ ಕ್ಯಾಥೋಲಿಕ್ ಪ್ರೀಮಿಯರ್ ಲೀಗ್ (ಸಿಪಿಎಲ್) - 2023, ಸೀಸನ್-1 ನವೆಂಬರ್ 11 ಮತ್ತು 12 ರಂದು ನಗರದ ಉರ್ವಾ ಮೈದಾನದಲ್ಲಿ ನಡೆಯಲಿದೆ.

ಮಂಗಳೂರು, ನ.10: ಕ್ಯಾಥೋಲಿಕ್ ಸ್ಪೋರ್ಟ್ಸ್ ಅಸೋಸಿಯೇಶನ್, ಮಂಗಳೂರು, ದಕ್ಷಿಣ ಕನ್ನಡ ಇದರ ವತಿಯಿಂದ  ಕ್ಯಾಥೋಲಿಕ್ ಪ್ರೀಮಿಯರ್ ಲೀಗ್ (ಸಿಪಿಎಲ್) - 2023, ಸೀಸನ್-1 ನವೆಂಬರ್ 11 ಮತ್ತು 12 ರಂದು ನಗರದ ಉರ್ವಾ ಮೈದಾನದಲ್ಲಿ ನಡೆಯಲಿದೆ.

ನವೆಂಬರ್ 11 ರಂದು ಶನಿವಾರ ಬೆಳಿಗ್ಗೆ 11.30 ಕ್ಕೆ ಉದ್ಘಾಟನಾ ಸಮಾರಂಭವು ಉರ್ವಾ ಅವರ್ ಲೇಡಿ ಆಫ್ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್‌ನ ಪ್ಯಾರಿಷ್ ಪಾದ್ರಿ ಫಾದರ್ ಬೆಂಜಮಿನ್ ಪಿಂಟೋ ಅವರ ಆಶೀರ್ವಾದದೊಂದಿಗೆ ನಡೆಯಲಿದೆ. ರೋಹನ್ ಕಾರ್ಪೊರೇಷನ್ ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್, ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಲೋಟಸ್ ಪ್ರಾಪರ್ಟೀಸ್ ಎಂಡಿ ಸಂಪತ್ ಶೆಟ್ಟಿ ಮತ್ತು ಎಫ್ 4 ಇಂಡಸ್ಟ್ರಿಯಲ್ ಸರ್ವಿಸಸ್ ಎಂಡಿ ಫ್ರಾನ್ಸಿಸ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.



ನವೆಂಬರ್ 12, ಭಾನುವಾರ ಸಂಜೆ 5 ಗಂಟೆಗೆ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್, ಬಿಜೈನ ಪ್ರಾಂಶುಪಾಲರಾದ ಫಾದರ್ ರಾಬರ್ಟ್ ಡಿಸೋಜಾ ಆಶೀರ್ವಾದದೊಂದಿಗೆ ಲೀಗ್‌ನ ಸಮರ್ಪಣೆ ಸಮಾರಂಭ ನಡೆಯಲಿದೆ. ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಜಾಯ್ಲಸ್ ಡಿಸೋಜ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಮೂಡುಬಿದಿರೆಯ ಅಶ್ಲಿ ಹಾರ್ಡ್‌ವೇರ್ ಮತ್ತು ಸ್ಟೀಲ್ಸ್ ರಾಜೇಶ್ ಮೆಂಡಿಸ್ ಭಾಗವಹಿಸಲಿದ್ದಾರೆ.

ಹತ್ತು ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಸೆಣಸಲಿವೆ.


ಇದರ ನೇರ ಪ್ರಸಾರ ಬೆದ್ರ ಮೀಡಿಯಾ ಯೂಟ್ಯೂಬ್ ಚಾನಲ್ ನಲ್ಲಿ  ನಡೆಯಲಿರುವುದು

Post a Comment

0 Comments