ದುಬೈಯಲ್ಲಿ ಮಂಗಳೂರಿನ ಯುವಕರ ಭವ್ಯ ಕ್ರೀಡಾ ಹಬ್ಬ: “Bejoice Champions Cup – 2025” ಆರಂಭ
ದುಬೈ: ಮಂಗಳೂರಿನ ಯುವಕರು ಅಶ್ರಫ್ ಮತ್ತು ಪ್ರೀತಂ ಅವರ ನೇತೃತ್ವದಲ್ಲಿ ದುಬೈಯಲ್ಲಿ ಆಯೋಜಿಸಿರುವ ಭವ್ಯ ಮೂರು ದಿನಗಳ ಕ್ರಿಕೆಟ್ ಹಬ್ಬ “Bejoice Champions Cup – 2025” ಇಂದು ಪ್ರಾರಂಭ . ಡಿಸೆಂಬರ್ 12ರಿಂದ 14, 2025ರವರೆಗೆ ನಡೆಯುವ ಈ ಟೂರ್ನಮೆಂಟ್ ಕ್ರೀಡಾಭಿಮಾನಿಗಳಲ್ಲಿ ಈಗಾಗಲೇ ದೊಡ್ಡ ಮಟ್ಟದ ಉತ್ಸಾಹವನ್ನು ಹಬ್ಬಿಸಿದೆ.
ಈ ಕ್ರೀಡಾ ಹಬ್ಬದ ಮುಖ್ಯ ಆಕರ್ಷಣೆಯೆಂದರೆ, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರ ಉಪಸ್ಥಿತಿ. ಪಠಾಣ್ ಅವರು ಈ ಸಂದರ್ಭದಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಲೈವ್ ಶೋನಲ್ಲಿ ಭಾಗವಹಿಸಲಿದ್ದಾರೆ.
ಈ ಕಪ್ ಗೆ ವಿಶಿಷ್ಟ ಆಕರ್ಷಣೆಯಾಗಿ ಹಲವು ಅತಿಥಿಗಳು ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ. Ihsan, Hanan Shah, Ajmal Khan ಸೇರಿದಂತೆ ಕಲಾವಿದರ ಚಿತ್ರಗಳು ಹಾಗೂ ಹೆಸರುಗಳು ವಿಶೇಷ ಗ್ಲಾಮರ್ ನೀಡಿವೆ. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ Hanan Shah Live Show ಕೂಡ ನಡೆಯಲಿದ್ದು, ಸಂಭ್ರಮಕ್ಕೆ ಮತ್ತೊಂದು ಮೆರಗು ಸೇರ್ಪಡೆಯಾಗಲಿದೆ..
ಟೂರ್ನಮೆಂಟ್‌ಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಕ್ರೀಡೆ ಮತ್ತು ಮನರಂಜನೆ ಎರಡನ್ನೂ ಒಂದೇ ವೇದಿಕೆಯಲ್ಲಿ ಅನುಭವಿಸುವ ಅವಕಾಶವನ್ನು ಕನ್ನಡಿಗರು ಹಾಗೂ ಕ್ರೀಡಾಪ್ರೇಮಿಗಳಿಗೆ ಒದಗಿಸಲಾಗುತ್ತಿದೆ.
ಕಾರ್ಯಕ್ರಮವು Bejoice Cricket Club, Queensland ಹಾಗೂ QueensPark Stadium, Sharjah ನಲ್ಲಿ ನಡೆಯಲಿದೆ.
ಅಶ್ರಫ್ ಮತ್ತು ಪ್ರೀತಂ ಅವರ ತಂಡವು ದುಬೈ–ಶಾರ್ಜಾದಲ್ಲಿ ಇರುವ ಕನ್ನಡಿಗರ ಏಕತೆ, ಕ್ರೀಡಾಸೌಹಾರ್ದ ಮತ್ತು ಮನರಂಜನೆಯನ್ನು ವೃದ್ಧಿಸುವ ಉದ್ದೇಶದಿಂದ ಈ ಮೂರು ದಿನಗಳ ಕ್ರೀಡಾ ಸಂಭ್ರಮವನ್ನು ಆಯೋಜಿಸಿದೆ ಎಂದು ತಿಳಿಸಿದೆ

0 Comments