ಟಿ20 ಸಿಟಿಜನ್ ಟ್ರೋಫಿ ಕಿರೀಟ – ನಜರ್ 9ನೇ ಬ್ಲಾಕ್ ಗೆಲುವಿನ ಘರ್ಜನೆ!
20 ಓವರ್‌ಗಳ ಪಂದ್ಯ ಕಲೆದ ಸುಮಾರು 20 ದಿನಗಳ ಕಾಲ ಶಂಶೀರ್ ಕಾಟಿಪಳ್ಳ ಅವರ ಪರಿಣಾಮಕಾರಿ ನಾಯಕತ್ವ ಹಾಗೂ ಕ್ರಿಕೆಟ್‌ಗಾಗಿ ನೀಡಿದ ನಿರಂತರ ಪ್ರೋತ್ಸಾಹದಲ್ಲಿ ನಡೆದ ಸಿಟಿಜನ್ ಟ್ರೋಫಿ T20 ಟೂರ್ನಮೆಂಟ್ ಕಾಟಿಪಳ್ಳ ಪ್ರಸಿದ್ಧ U2 ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ಜರುಗಿತು.
ಈ ಟೂರ್ನಮೆಂಟ್‌ಗೆ ಸ್ಥಳೀಯ ಕ್ರಿಕೆಟ್ ಅಭಿಮಾನಿಗಳಿಂದ ಅಪಾರ ಸ್ಪಂದನೆ ದೊರೆಯಿತು. ದಿನಂಪ್ರತಿ ನಡೆದ ರೋಚಕ ಪಂದ್ಯಗಳು, ಯುವ ಆಟಗಾರರಿಗೆ ಲಭಿಸಿದ ವೇದಿಕೆ ಹಾಗೂ ಕಠಿಣ ಪೈಪೋಟಿಗಳು ಈ ವರ್ಷದ ಸಿಟಿಜನ್ ಟ್ರೋಫಿಯನ್ನು ವಿಶೇಷವಾಗಿಸಿದವು.
ಟೂರ್ನಮೆಂಟ್‌ನ ಅತ್ಯಂತ ರೋಮಾಂಚಕಾರಿ ಕ್ಷಣಗಳಲ್ಲಿ, ಅದ್ಭುತ ಸಮನ್ವಯ, ಸ್ಥಿರತೆ ಮತ್ತು ತಾಕತ್‌ಭರಿತ ಆಟ ತೋರಿದ ನಜರ್ 9ನೇ ಬ್ಲಾಕ್ ತಂಡವು ಚಾಂಪಿಯನ್ ಆಗಿ ಕಿರೀಟ ಮುಡಿಗೇರಿಸಿಕೊಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಸಮತೋಲನ ಪ್ರದರ್ಶಿಸಿದ ಈ ತಂಡ, ಟೂರ್ನಮೆಂಟ್‌ನಿಂದಲೇ ಗಮನ ಸೆಳೆದಿತ್ತು.
ಇನ್ನೊಂದೆಡೆ, ಉತ್ತಮ ಹೋರಾಟ, ಜಾಜ್ವಲ್ಯಮಾನ ಕ್ಷಣಗಳು ಹಾಗೂ ತೀವ್ರ ಸ್ಪರ್ಧೆ ನೀಡಿದ ಫ್ರೆಂಡ್ಸ್ ಮುದುಶೆಡ್ಡೆ ತಂಡವು ರನ್ನರ್ಸ್-ಅಪ್ ಆಗಿ ಗೌರವ ಪಡೆದಿದೆ. ಚಾಂಪಿಯನ್‌ಷಿಪ್ ಗೆಲುವಿಗೆ ತಲುಪುವ ಹಾದಿಯಲ್ಲಿ ತೋರಿದ ಅವರ ಆಟ ಪ್ರೇಕ್ಷಕರ ಗಮನ ಸೆಳೆಯಿತು.
ಶಂಶೀರ್ ಕಾಟಿಪ್ಪಲ್ಲ – ಸ್ಥಳೀಯ ಕ್ರಿಕೆಟ್‌ಗೆ ಹಿತೈಷಿ
ಈ ಟೂರ್ನಮೆಂಟ್‌ನ ಹಿಂದಿನ ಶಕ್ತಿ ಎಂದರೆ ಶಂಶೀರ್ ಕಾಟಿಪಳ್ಳ. ಸ್ಥಳೀಯ ಕ್ರಿಕೆಟ್‌ಗೆ ಸದಾ ಬೆಂಬಲ, ಯುವ ಅಭ್ಯಾಸಿಗಳಿಗೆ ಅವಕಾಶ, ಹಾಗೂ ಟೂರ್ನಮೆಂಟ್ ಆಯೋಜನೆಯಲ್ಲಿ ಮಾಡಿದ ಶ್ರಮದಿಂದ ಅವರು ಕ್ರೀಡಾಭಿಮಾನಿಗಳ ಮನಸೆಳೆದಿದ್ದಾರೆ.
ಕ್ರಿಕೆಟ್ ಪ್ರತಿಭೆಗಳು ಬೆಳೆಯಲು ಅಗತ್ಯವಿರುವ ವೇದಿಕೆಯನ್ನು ನಿರಂತರವಾಗಿ ಒದಗಿಸುತ್ತಿರುವುದು ಇಂದು ಕಾಟಿಪಳ್ಳ ಪ್ರದೇಶದ ಕ್ರಿಕೆಟ್‌ಗೆ ಹೊಸ ಚೈತನ್ಯ ನೀಡಿದೆ.
20 ದಿನಗಳ ಕಾಲ ನಡೆದ ಈ ಸಿಟಿಜನ್ ಟ್ರೋಫಿ ಟೂರ್ನಮೆಂಟ್ ಆಟಗಾರರ ಶಕ್ತಿ, ತಂಡಗಳ ಹೋರಾಟ, ಹಾಗೂ ಶಂಶೀರ್ ಕಾಟಿಪಳ್ಳ ನಿರ್ವಹಣೆಯೊಂದಿಗೆ ಯಶಸ್ವಿಯಾಗಿ ಸಂಪನ್ನವಾಯಿತು.



0 Comments