ಕಾಟಿಪಳ್ಳ Azad Foundation (R) Katipalla ಹಾಗೂ Azad Foundation Overseas ಮುಖಾಂತರ ಆಯೋಜಿಸಲಾಗಿರುವ ಪ್ರತಿಷ್ಠಿತ ಆಜಾದ್ ಟ್ರೋಫಿ 2026 ಫ್ಲಡ್ ಲೈಟ್ ಕ್ರಿಕೆಟ್ ಟೂರ್ನಮೆಂಟ್‌ಗೆ ಕ್ರೀಡಾಭಿಮಾನಿಗಳಲ್ಲಿ ಈಗಾಗಲೇ ಭಾರಿ ನಿರೀಕ್ಷೆ ನಿರ್ಮಾಣವಾಗಿದೆ.
2026ರ ಫೆಬ್ರವರಿ 6, 7 ಮತ್ತು 8 ರಂದು ನಡೆಯಲಿರುವ ಈ ಮೂರು ದಿನಗಳ ಕ್ರಿಕೆಟ್ ಸಂಭ್ರಮಕ್ಕೆ 24 ಆಯ್ಕೆಯ ತಂಡಗಳು ತಮ್ಮ ಪ್ರತಿಭೆಯನ್ನು ತೋರಿಸಲಿವೆ. ಕಾಟಿಪಳ್ಳ ಶಾಲಾ ಮೈದಾನದಲ್ಲಿ ನಡೆಯಲಿರುವ ಈ ಟೂರ್ನಮೆಂಟ್‌ಗೆ ಪ್ರವೇಶ ಶುಲ್ಕ ₹10,000 ಎಂದು ನಿಗದಿಪಡಿಸಲಾಗಿದೆ.
ಈ ಬಾರಿ ವಿಜೇತ ತಂಡಕ್ಕೆ ₹1,00,035 ನಗದು ಬಹುಮಾನ ಜೊತೆಗೆ ಆಜಾದ್ ಟ್ರೋಫಿ, ರನ್ನರ್ ಅಪ್ ತಂಡಕ್ಕೆ ₹50,035 ಹಾಗೂ ಆಜಾದ್ ಟ್ರೋಫಿ ಪ್ರದಾನವಾಗಲಿದೆ. ಆಟಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಮಿತಿಯು ಅತ್ಯಂತ ಆಕರ್ಷಕ ಬಹುಮಾನಗಳನ್ನು ಘೋಷಿಸಿದೆ.
ಈ ಟೂರ್ನಮೆಂಟ್ ಅನ್ನು Bedra Media ತವರ ಸ್ಥಳದಿಂದಲೇ ಲೈವ್ ಸ್ಟ್ರೀಮಿಂಗ್ ಮಾಡುವ ಮೂಲಕ ಕ್ರೀಡಾಭಿಮಾನಿಗಳಿಗೆ ನೇರಪ್ರಸಾರದ ಮೂಲಕ ಮೆಲುಕು ಹಾಕಲಿದೆ.
ಕಾಟಿಪಳ್ಳ ಮತ್ತು ಸುತ್ತಮುತ್ತಲಿನ ಕ್ರಿಕೆಟ್ ಪ್ರೇಮಿಗಳು ಎದುರುನೋಡುವ ಅತ್ಯಂತ ದೊಡ್ಡ ಕ್ರಿಕೆಟ್ ಕಣವಾಗಿರುವ ಆಜಾದ್ ಟ್ರೋಫಿ 2026, ಕ್ರೀಡಾಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಲಿದೆ ಎಂಬ ನಂಬಿಕೆ ಆಯೋಜಕರದ್ದು.

0 Comments