32 ತಂಡಗಳು ಭಾಗವಹಿಸುವ ಪ್ರತಿಷ್ಠಿತ “ISCL–2025” ಇಂಡಿಯನ್ ಸಾಫ್ಟ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಬೆಂಗಳೂರಿನ ಕಿಣಿ ಕ್ರೀಡಾಂಗಣದಲ್ಲಿ ಡಿಸೆಂಬರ್ 1ರಿಂದ 21ರವರೆಗೆ ಜರುಗಲಿದೆ.
ಈ ಪಂದ್ಯಾಟದ ವೀಕ್ಷಕ ವಿವರಣೆಗೆ ಕರ್ನಾಟಕದ ದಕ್ಷಿಣಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿರುವ ಸುಕುಮಾರ್ ಕಂದಪ್ಪಾಡಿ, ತಮ್ಮ ದೀರ್ಘಕಾಲದ ಪರಿಶ್ರಮ, ನಿಷ್ಠೆ ಹಾಗೂ ನಿಖರ ನಿರ್ಧಾರ ಸಾಮರ್ಥ್ಯದ ಮೂಲಕ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
✨ ಇತ್ತೀಚೆಗೆ ಮುಗಿದ KSPL (Karnataka Soft Ball Primer League) ನಲ್ಲಿ ‘ಉತ್ತಮ ವೀಕ್ಷಕ’ ಪ್ರಶಸ್ತಿ ಗಳಿಸಿ ಎಲ್ಲರ ಮನಸ್ಸು ಗೆದ್ದಿರುವುದು ಇವರ ಸಾಧನೆಗೆ ಮತ್ತೊಂದು ಹೆಗ್ಗುರುತು. ಇವರು ಸತತ ಎರಡು ವರ್ಷಗಳಿಂದ KSPL ನಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದಾರೆ.
ಈ ಗೌರವವು ಇವರನ್ನು ISCL–2025ರ ಪ್ರಮುಖ ವೀಕ್ಷಕರ ಪಟ್ಟಿಗೆ ತರುವಲ್ಲಿ ಮಹತ್ವದ ಪಾತ್ರವಹಿಸಿದೆ. ಇವರು ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಸುಳ್ಯ ತಾಲೂಕಿನಿಂದ ಆಯ್ಕೆಯಾದ ಪ್ರಪ್ರಥಮ ವೀಕ್ಷಕ ವಿವರಣೆಗಾರ. ಕಳೆದ 14 ವರ್ಷಗಳಿಂದ ರಾಜ್ಯದ ಹಲವಾರು ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿಯಲ್ಲಿ ವೀಕ್ಷಕ ವಿವರಣೆ ನೀಡಿದ ಹಿರಿಮೆ ಇವರದು.

0 Comments