ಮೂಡುಬಿದಿರೆ: EDGA STRIKERS ಆಶ್ರಯದಲ್ಲಿ ಅಕ್ಟೋಬರ್ 1 ಮತ್ತು 2ರಂದು ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಕೋಟೆಬಾಗಿಲು ಪ್ರಿಮೀಯರ್ ಲೀಗ್( ಕೆಪಿಎಲ್ 2023) ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ಪ್ರಪಥಮ ಬಾರಿಗೆ "ಈದ್ಗಾ ಸ್ಟ್ರೆಕ್ಕರ್ಸ್" ತಂಡ ಆಯೋಜಿಸುತ್ತಿರುವ
ಕೆ ಪೀ ಎಲ್ ಪಂದ್ಯಾವಳಿ ಇದೆ ಬರುವ ದಿನಾಂಕ 1/10/ 2023 ಹಾಗೂ 2/10/2023 ರಂದು ಮೂಡಬಿದ್ರೆಯ ಕ್ರಿಕೆಟ್ ಕಾಶಿ ಎಂದೇ ಹೆಸರು ಗಳಿಸಿರುವ ' ಸ್ವರಾಜ್ಯ ಮೈದಾನದಲ್ಲಿ ' ನಡೆಯಲಿದೆ.
ಬಿಡ್ಡಿಂಗ್ ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ
8 ಮಾಲೀಕರು,8 ಐಕಾನ್ ಆಟಗಾರರು,ಹಾಗೂ 8 ಕಪ್ತಾನರು ಒಳಗೊಂಡ 8 ತಂಡಗಳು ಭಾಗವಹಿಸಲಿವೆ.
ಈ ಪಂದ್ಯಾವಳಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಎಂದೇ ಹೆಸರು ಗಳಿಸಿರುವ
"ಬೆದ್ರಾ ಮೀಡಿಯಾ" ಯುಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರವನ್ನು ನಡೆಸಲಿದೆ.

0 Comments