ಮೂಡಬಿದ್ರಿಯಲ್ಲಿ ಜಮಾಅತ್ ವತಿಯಿಂದ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಮೂವರು ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಹಜ್ ಯಾತ್ರೆಗೆ ಹೊರಡುತ್ತಿರುವ ಅಬ್ದುಲ್ ಖಾದರ್, ನಾಸಿರ್ ಅಂಗರಕರಿಯ ಹಾಗೂ ಆಳ್ವಾಸ್ ಪ್ರಿನ್ಸಿಪಾಲ್ ಸದಾಕತ್ ಸರ್ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮೂಡಬಿದ್ರಿ ಖತೀಬ್ ಹಾಗೂ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮುಖ್ಯವಾಗಿ ಉಪಸ್ಥಿತರಿದ್ದು, ಯಾತ್ರಿಕರಿಗೆ ಶುಭಾಶಯಗಳನ್ನು ತಿಳಿಸಿದರು.
ಇದೇ ವೇಳೆ ಜಮಾಅತ್ ಸದಸ್ಯರಾದ ನದೀಮ್, ಮೊಹಮ್ಮದ್, ಹನೀಫ್, ರಝಾಕ್, ಖಾದರ್, ಅರೀಸ್, ಇರ್ಷಾದ್, ನಿಸಾರ್, ಖಾದರ್ ಜ್ಯೋತಿನಗರ ಹಾಗೂ ಖಾದರ್ ಸಾಲ್ದಾನ್ ಕಾಂಪೌಂಡ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಎಲ್ಲರ ಸಮಕ್ಷದಲ್ಲಿ ಹಜ್ ಯಾತ್ರಿಕರನ್ನು ಗೌರವಿಸಲಾಯಿತು. ಸಮಾರಂಭವು ಭಾವನಾತ್ಮಕ ವಾತಾವರಣದಲ್ಲಿ ನೆರವೇರಿದ್ದು, ಯಾತ್ರಿಕರ ಯಶಸ್ವಿ ಹಾಗೂ ಸುಖಕರ ಹಜ್ ಪ್ರಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.


0 Comments