ಕುಪ್ಪೆಪದವು: ಸ್ಥಳೀಯ ಕ್ರೀಡಾಭಿಮಾನಿಗಳ ಬಹು ನಿರೀಕ್ಷಿತ ಕ್ರಿಕೆಟ್ ಹಬ್ಬವಾದ ಸೌಹಾರ್ದ ಪ್ರೀಮಿಯರ್ ಲೀಗ್ (SPL) - 2026 ಈ ಏಪ್ರಿಲ್ 13, 14 ಮತ್ತು 15 ರಂದು ಭರ್ಜರಿಯಾಗಿ ನಡೆಯಲಿದೆ.
ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ (ರಿ), ಕುಪ್ಪೆಪದವು ಇದರ ಆಯೋಜನೆಯಲ್ಲಿ ನಡೆಯುವ ಈ ಟೂರ್ನಮೆಂಟ್ ಈಗಾಗಲೇ ಕ್ರೀಡಾಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ. SPL ಸೀಸನ್-06 ಪಂದ್ಯಗಳು ಕುಪ್ಪೆಪದವಿನ ಅರಣಮನೆ ಮೈದಾನದಲ್ಲಿ ನಡೆಯಲಿವೆ.
ಈ ವರ್ಷದ ಲೀಗ್ ವಿಶೇಷ ಆಕರ್ಷಣೆಯಾಗಿ “ಮ್ಯಾನ್ ಆಫ್ ದ ಸೀರೀಸ್” ಪ್ರಶಸ್ತಿ ವಿಜೇತರಿಗೆ ಆಕರ್ಷಕ ಬಹುಮಾನವಾಗಿ ಸ್ಕೂಟರ್ ನೀಡಲಾಗುತ್ತಿದೆ. ಇದರಿಂದ ಆಟಗಾರರ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
ಈ ಟೂರ್ನಮೆಂಟ್‌ನಲ್ಲಿ ಓಪನ್ ಐಕಾನ್ ವಿಭಾಗದಲ್ಲಿ 2 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಸ್ಥಳೀಯ ಹಾಗೂ ಹೊರನಾಡಿನ ಪ್ರತಿಭೆಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ವೇದಿಕೆ ಸಿದ್ಧವಾಗಿದೆ.
ಪಂದ್ಯಗಳ ನೇರ ಪ್ರಸಾರವನ್ನು ಬೆಡ್ರಾ ಮೀಡಿಯಾ ಮೂಲಕ ವೀಕ್ಷಕರು ಅನುಭವಿಸಬಹುದು. ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟಗಾರರನ್ನು ಉತ್ತೇಜಿಸಲು ಆಯೋಜಕರು ಮನವಿ ಮಾಡಿದ್ದಾರೆ.

0 Comments